...
Show More
Mao the unknown story - Jung Chang Jon holliday.
ಗೆದ್ದವರು ಇತಿಹಾಸವ ತನಗೆ ಬೇಕಾದ ಹಾಗೆ ಬರೆಯುತ್ತಾರೆ ಎಂಬುದು ಸುಳ್ಳಲ್ಲ. ಕ್ರೂರತೆಯಲ್ಲಿ ಯಾವ ಹಿಟ್ಲರನಿಗೂ ಕಡಿಮೆಯಿಲ್ಲದ ಈತ ಈಗಲೂ ಒಂದು ವರ್ಗದ ಜನರಿಗೆ ಆರಾಧ್ಯ ದೈವ!
ಈ ಪುಸ್ತಕ ಹತ್ತು ವರ್ಷಗಳ ರಿಸರ್ಚ್‌ನ ಫಲ. ಒಂದೇ ಒಂದು ಪ್ಯಾರಾ ಕೂಡ ಅನಗತ್ಯವಾಗಿಲ್ಲ ಎಂಬುದು ಇದರ ಹೆಗ್ಗಳಿಕೆ.
ಪುಸ್ತಕದ ಕೊನೆಗೆ ಸರಿಸುಮಾರು ಇನ್ನೂರು ಪುಟ ಆಕರಗಳಿಂದಲೇ ತುಂಬಿದೆ ಎಂದರೆ ನಿಮಗೆ ಅರ್ಥವಾಗಬಹುದು.
ಮಾವೋ!
ತನ್ನವರೆಂದರೆ ಮಾನವ ಸಹಜವಾದ ಯಾವುದೇ ಗುಣಗಳಿಲ್ಲದ ರಕ್ತಪಿಪಾಸು. ಅವನಿಗೆ ತನ್ನ ಹೆಂಡತಿ ಮಕ್ಕಳು ಸತ್ತಾಗಲೂ ನೋವು ವ್ಯಕ್ತಪಡಿಸಿದ ಉದಾಹರಣೆ ಕಾಣುವುದಿಲ್ಲ. ಇದು ಅವನ ಆರಂಭದ ದಿನಗಳಿಂದ ಹಂತ ಹಂತವಾಗಿ ಎಲ್ಲರೂ ತನ್ನೆದುರು ಇದ್ದರೂ ನಾಯಕನಾಗಿ ವಿರೋಧಿಸಿದವರ ಕತೆ ಮುಗಿಸುತ್ತಾ ತನ್ನ ಬೆಳವಣಿಗೆಗೆ ಸ್ವಂತದವರ ಬಲಿ ಕೊಡುತ್ತಾ ಕೇವಲ ಸ್ಟಾಲಿನ್‌ನ ಬೆಂಬಲದಿಂದ ನಾಯಕನಾಗಿ ಸರ್ವಾಧಿಕಾರಿಯಾಗಿ ಚೀನಾವನ್ನು ಹಾಳುಗೆಡವಿದ ಕಥೆ ಇದು.
ಅಧಿಕೃತ ದಾಖಲೆಗಳ ಪ್ರಕಾರ ನಾಲ್ಕು ಕೋಟಿ ಜನರ ಸಾವಿಗೆ ಕಾರಣ ಇವನು.ಅನಧಿಕೃತ ದೇವರಿಗೇ ಗೊತ್ತು.
ಒಳ್ಳೆಯ ಮಾತುಗಾರ ಅಲ್ಲ. ಜನರಿಗೆ ಇಷ್ಟವಾದವ ಅಲ್ಲ. ಕೃಷಿಕರ ಕಂಡರೆ ಇಷ್ಟವೂ ಇಲ್ಲ. ಸೈನಿಕರಿಂದ ತಿರಸ್ಕರಿಸಲ್ಪಟ್ಟವ. ಅಷ್ಟೇಕೆ ಅವರ ಪ್ರೀತಿಸಿದವರ ಕೂಡ ಸರಿಯಾಗಿ ಬಾಳಿಸಲಿಲ್ಲ. ಸ್ವಂತ ಮಗ ಯುದ್ಧದಲ್ಲಿ ಸತ್ತಾಗ ಅವನ ಹೆಂಡತಿಯಿಂದ ಎರಡೂವರೆ ವರ್ಷ ಮುಚ್ಚಿಟ್ಟವ. ತನಗೆ ತೋಚಿದ ಹಾಗೆ ನಿಯಮಗಳ ಜಾರಿಗೊಳಿಸಿ ಜನರ ನರಳಿಸಿದವ. ರಾಜಕೀಯದ ಏಣಿ ಏರಲು ಕುತಂತ್ರದಿಂದ ಅಡ್ಡ ಬಂದವರ ಮುಗಿಸಿದವ. ತನ್ನ ಲೈಂಗಿಕ ಹಪಾಹಪಿಗೆ ಹೆಣ್ಣುಗಳ ಬಳಸಿಕೊಂಡವ. ಇವನ ಅಧಿಕಾರದ ಅವಧಿಯಲ್ಲಿ ಕೇವಲ ಹಸಿವಿನಿಂದ ಜನ ಸತ್ತುಹೋದರು. ಇವ ಮಾತ್ರ ಕೋಟೆಯಲ್ಲಿ ರಕ್ಷಣೆಗೆ ಕಾವಲು ಪಡೆಯ ನಡುವೆ ಬಾಳಿದ. ಅವನು ತಿನ್ನುವ ಅಕ್ಕಿಯನ್ನೇ ವಿಶೇಷವಾಗಿ ಬೆಳೆಯುವ ಹಾಗೆ ವ್ಯವಸ್ಥೆ ಮಾಡಿಕೊಂಡ. ಕೊನೆಗೆ ತನ್ನ ಮಾರ್ಗದರ್ಶಕ ಸ್ಟಾಲಿನ್ ಎದುರು ಬಾಲ ಬಿಚ್ಚಲು ಹೋದ. ಅವನು ಇವನ ಹೆಬ್ಬೆರಳಿಂದ ಅದುಮಿ ಹಿಡಿದ.
ಗ್ರೇಟ್ ಪರ್ಜ್ ಹೆಸರಲ್ಲಿ ತನ್ನ ಎದುರಾಳಿಗಳ ಹುಡುಕಿ ಹುಡುಕಿ ಕೊಲ್ಲಿಸಿದ. ಒಂದು ಕುಟುಂಬ ತನ್ನವರ ಉಳಿಸಲು ಹಣ ಕೊಡಬೇಕಾಯಿತು. ಹಣ ಕಡಿಮೆಯಾಯಿತು ಎಂದು ಇವರ ಕೆಂಪು ಸೈನಿಕರು ಇಬ್ಬರ ಮಾತ್ರ ಉಳಿಸಿ ಉಳಿದವರ ವಧಿಸಿದರು!
ಇದನ್ನು ಓದುತ್ತಾ ರಕ್ತ ಕುದಿಯುತ್ತದೆ. ರಾತ್ರಿ ಓದುತ್ತಾ ಇವನನ್ನು ಈ ರಾಕ್ಷಸನನ್ನು ಅದರಲ್ಲೂ ತನ್ನ ನಂಬಿಕಸ್ಥರು ಖಾಯಿಲೆ ಬಿದ್ದಾಗ ಅವರಿಗೆ ಸರಿಯಾಗಿ ವೈದ್ಯಕೀಯ ವ್ಯವಸ್ಥೆ ನಿರಾಕರಿಸಿದ ವ್ಯಕ್ತಿಯ ಒಂದು ವರ್ಗದವರು ಆರಾಧಿಸುವುದು ನೋಡಿ ಹೇಸಿಗೆಯಾಗುತ್ತದೆ.
ಒಂದೇ ಮಾತು.
ಹಿಟ್ಲರ್ ಸೋತ. ಕ್ರೂರಿಯಾದ.
ಇವ ಈಗಲೂ ಪರದೆಯ ಹಿಂದೆ ಹಲವರಿಗೆ ಗುರುವಾಗಿದ್ದಾನೆ. ಯಾಕೆಂದರೆ ಇವ ಗೆದ್ದವ!
ಇವ ಮಾತ್ರ ಅಲ್ಲ ಈ ಪಟ್ಟಿಯಲ್ಲಿರುವುದು.
ನೀವು ಓದಬೇಕಾಗಿರುವ ಜೀವನಚರಿತ್ರೆ ಇದು.